ಬೆಂಗಳೂರು, ಕರ್ನಾಟಕ, ಭಾರತ:
೨೨ನೇ ಫ಼ೆಬ್ರವರಿ ೨೦೧೭
ಪರಿಚಯ:

’ಆರ್ಟ್ ಆಫ಼್ ಲಿವಿಂಗ್’ ಪ್ರತಿಷ್ಠಾನದಲ್ಲಿ
ಹಿರಿಯ ಅಧ್ಯಾಪಕರಾಗಿರುವ ಸಾಹಿಲ್ ಜಗ್ತಿಯಾನಿ, ತಮ್ಮ ಆರಾಧ್ಯ ದೈವ
ಗುರುದೇವ ಶ್ರೀ ಶ್ರೀ ರವಿಶಂಕರರ ಪ್ರೀತಿ ಮತ್ತು ಶಾಂತಿಯ ಸಂದೇಶವನ್ನು ವಿವಿಧ ಕಾರ್ಯಾಗಾರಗಳ
ಮೂಲಕ ಹರಡುವ ಕಾಯಕಕ್ಕೆ ಬದ್ಧರಾಗಿದ್ದಾರೆ. ಸಮಕಾಲೀನ ಧಾರ್ಮಿಕ
ಸಂಗೀತವನ್ನೂ ಪ್ರಪಂಚದಾದ್ಯಂತ ಕಳೆದೆರಡು ದಶಕಗಳಿಂದ ಅವರು ಪ್ರಸರಿಸುತ್ತಿದ್ದಾರೆ. ಈ ಕಾರ್ಯಭಾರವು ವಿಶ್ವಾದ್ಯಂತ, ಅದರಲ್ಲೂ ಯುವ ಸಮುದಾಯದ ಮೂಲಕ,
ಅವರಿಗೆ ಜನಪ್ರಿಯತೆ ದೊರಕಲು ಕಾರಣವಾಗಿದೆ.
ಸಂಗೀತ ಲಾಂಛನ ’ಎಸ್.ಎಸ್.ಜೆ. ಪ್ರೊಡಕ್ಷನ್ಸ್’ನ ಪ್ರಭಾವಳಿಯಲ್ಲಿ, ಸಾಹಿಲ್ ಜಗ್ತಿಯಾನಿ, ಸ್ವರ ಮಾಧುರ್ಯದ ೨೨ ಆಲ್ಬಂಗಳನ್ನು ಸಂಗೀತಾಭಿಮಾನಿಗಳಿಗಾಗಿ ಬಿಡುಗಡೆ ಮಾಡುವ ನವ ಪಯಣಕ್ಕೆ ಸನ್ನದ್ಧರಾಗಿದ್ದಾರೆ. ಸ್ವಂತ ಗಾಯನದ / ಕಲಾವಂತಿಕೆಯ ೧೭ ಸ್ಟುಡಿಯೋ ಆಲ್ಬಂಗಳನ್ನೂ, ನಿರೂಪಕ ಹಾಗೂ ಸಂಗೀತ ನಿರ್ದೇಶಕ ಸ್ಥಾನವನ್ನಲಂಕರಿಸಿ ೧೪ ಆಲ್ಬಂಗಳನ್ನೂ ಕಳೆದ ವರ್ಷಗಳಲ್ಲಿ ಬಿಡುಗಡೆ ಮಾಡಿದ ಆಳವಾದ ಅನುಭವ ಅವರ ಇಂದಿನ ಕಾರ್ಯಕ್ರಮಕ್ಕೆ ಉತ್ತೇಜನ ನೀಡುತ್ತಿದೆ.

’ಎಸ್.ಎಸ್.ಜೆ.
ಪ್ರೊಡಕ್ಷನ್ಸ್’ನ ಸ್ಥಾಪಕ ಸಾಹಿಲ್ ಜಗ್ತಿಯಾನಿ
ಭಕ್ತಿಪೂರ್ವಕವಾಗಿ ಹೇಳುವ ಮಾತಿದು: ’ಗುರುದೇವ ಶ್ರೀ ಶ್ರೀ
ರವಿಶಂಕರರ ಅನುಗ್ರಹದಿಂದ ನನ್ನ ಬದುಕಿನಲ್ಲಿ ಆಶ್ಚರ್ಯಕರವಾದ ಬದಲಾವಣೆ ಏರ್ಪಟ್ಟಿದೆ. ಮಹತ್ತರವಾದ ಆ ಬದಲಾವಣೆಯ ಅನುಭವ ಸಂಗ್ರಹವನ್ನು ನನ್ನ ಸಂಗೀತದ ಮುಖಾಂತರ ವಿಶ್ವಾದ್ಯಂತ
ಕೇಳುಗರೊಂದಿಗೆ ಹಂಚಿಕೊಳ್ಳುವುದು ನನ್ನ ಏಕೈಕ ಉದ್ದೇಶವಾಗಿದೆ.’
ಲಾಂಛನದ ಉದ್ಘಾಟನೆ ಮತ್ತು ಮಾರ್ಚ್ ೩ರ ಸಂಗೀತ ಸಂಜೆ
ಕುರಿತು:

ಎಸ್.ಎಸ್.ಜೆ. ಪ್ರೊಡಕ್ಷನ್ಸ್
ಕುರಿತು:
’ಎಸ್.ಎಸ್.ಜೆ.
ಪ್ರೊಡಕ್ಷನ್ಸ್’ನ್ನು ಸಂಗೀತಕ್ಕೆ ಸಂಬಂಧಿಸಿದ ಸಮಸ್ತ ಅಗತ್ಯಗಳನ್ನೂ
ಪೂರೈಸಬಲ್ಲ ಏಕ ಗವಾಕ್ಷಿಯೆಂದು ಕರೆದರೆ ಉತ್ಪ್ರೇಕ್ಷೆಯಾಗಲಾರದು. ನಾದ
ವೈಖರಿ ಯಾವುದಾದರೂ ಸರಿ, ಅಗತ್ಯ ಸೌಲಭ್ಯಗಳು ಅಲ್ಲಿವೆ. ಜಾಹಿರಾತು ಚಲಚ್ಚಿತ್ರಗಳ ಸಂಗೀತ, ಮ್ಯೂಸಿಕ್ ಆಲ್ಬಂ
ರೆಕಾರ್ಡಿಂಗ್, ಫಿಲ್ಮ್ ಸ್ಕೋರಿಂಗ್, ಥೀಂ
ಸಾಂಗ್ಸ್, ಮಾಸ್ಟರಿಂಗ್ ಆಡಿಯೋ, ವೋಕಲ್
ಎನ್ಹಾನ್ಸ್ಮೆಂಟ್, ಸೆಷನ್ ವರ್ಕ್ ಹಾಗೂ ೫.೧
ಸರೌಂಡ್ ಸೌಂಡ್ ಫಿಲ್ಮ್ ಸಾಂಗ್ಸ್ ಮುಂತಾಗಿ ಯಾವ ಕೆಲಸವಾಗಿದ್ದರೂ ನಮಗೆ ವಹಿಸಿ ಸಮಯ ನಷ್ಟದಿಂದಲೂ,
ಹತ್ತು ಕಡೆ ಅಲೆಯುವ ಪ್ರಮೇಯದಿಂದಲೂ ತಪ್ಪಿಸಿಕೊಳ್ಳಬಹುದು. ಕಲಾವಿದರು ತಮ್ಮ ಕಲಾಕೃತಿಗಳ ಆನ್ ಲೈನ್ ಮಾರಾಟಕ್ಕೆ ಅಗತ್ಯವಾದ ಆಪ್ಸ್ ಕ್ಷಿಪ್ರ
ತಯಾರಿಕೆ ಸಂಬಂಧವಾಗಿಯೂ ನಮ್ಮನ್ನು ಸಂಪರ್ಕಿಸಬಹುದು.
’ಗಿರಿ ಟ್ರೇಡಿಂಗ್ ಏಜೆನ್ಸಿ ಪ್ರೈವೇಟ್ ಲಿಮಿಟೆಡ್’ನೊಂದಿಗೆ ’ಎಸ್.ಎಸ್.ಜೆ. ಪ್ರೊಡಕ್ಷನ್ಸ್’ನ ನಿಕಟ ಸಹಯೋಗ ಹೊಂದಿದೆ. ಇದು, ’ಯೂನಿವರ್ಸಲ್ ಮ್ಯೂಸಿಕ್ ಇಂಡಿಯಾ ಪ್ರೈವೇಟ್ ಲಿಮಿಟೆಡ್’,
’ಮನೋರಮಾ ಮ್ಯೂಸಿಕ್”, ’ಇನ್ರೆಕೋ ಅಂಡ್ ಆರ್ಟಿಸ್ಟ್ಸ್
ಇನ್ಕ್ಲೂಡಿಂಗ್ ಇಂಡಸ್ ಕ್ರೀಡ್’ ಮುಂತಾದ ಸಂಸ್ಥೆಗಳ ಆಪ್ಸ್ ತಯಾರಿಕೆ
ಮತ್ತು ಮಾರಾಟವನ್ನು ಹಿಂದಿನ ವರ್ಷಗಳಲ್ಲಿ ಸಾಹಿಲ್ ಜಗ್ತಿಯಾನಿಯವರು ನಿರ್ವಹಿಸಿ ಹೊಂದಿರುವ
ಅನುಭವದ ಫಲಶ್ರುತಿ.
ನೀವು ಹೊಂದುವ ಸೇವೆಗೆ ಬೋನಸ್ ಎಂಬಂತೆ ’ಎಸ್.ಎಸ್.ಜೆ. ಪ್ರೊಡಕ್ಷನ್ಸ್’ ಒದಗಿಸುವ ಉಚಿತ ಆಪ್ ಅತ್ಯಂತ ಜನಪ್ರಿಯ. ಉದಾಹರಣೆಗೆ, ಸ್ವಂತ ಉಪಯೋಗಕ್ಕಾಗಿ ’ಎಸ್.ಎಸ್.ಜೆ. ಪ್ರೊಡಕ್ಷನ್ಸ್’ ಬಿಡುಗಡೆ ಮಾಡಿರುವ ’ಆಪ್’ನ ಡೌನ್ ಲೋಡ್ ಸಂಖ್ಯೆ ೫ ಲಕ್ಷವನ್ನು ದಾಟಿದೆ. ಗೂಗಲ್ ಪ್ಲೇ ಮತ್ತು ಯುಟ್ಯೂಬ್ ಪ್ರಿ-ರಿಲೀಸ್ ವಿಡಿಯೋಗಳ ವೀಕ್ಷಕರ ಸಂಖ್ಯೆ ಒಂದು ಲಕ್ಷವನ್ನು ದಾಟಿದೆ. ನಮ್ಮ ಸೇವೆಯನ್ನು ಅಪೇಕ್ಷಿಸುವವರಿಗೂ ಇಂಥ ಲಾಭ ಪ್ರಾಪ್ತವಾಗಲಿ. ನಮ್ಮನ್ನು ಕೂಡಲೇ ಸಂಪರ್ಕಿಸಿ, ಆಕರ್ಷಕ ಬೆಲೆಯಲ್ಲಿ ನಮ್ಮ ಸೇವೆಯ ಲಾಭವನ್ನು ಪಡೆಯಿರಿ.

ಸಂಪರ್ಕ ವಿಳಾಸ: Sahil Jagtiani, # S 306 Soudhamini Apartments, Kanakapura Road, Udayapura, Bangalore – 560 038. ದೂರವಾಣಿ: 9986086860