ಶನಿವಾರ, ಜುಲೈ 13, 2019

ತುಮಕೂರಿನಲ್ಲಿ ಹಿರಿಯ ಪತ್ರಕರ್ತ ಸಿ. ಟಿ. ಜೋಶಿಯವರಿಗೆ ಸನ್ಮಾನ

ಯುರೋಪ ಹಾಗೂ ಅದರ ಜನತೆಯ ಕುರಿತು ಅವರ ಪ್ರವಾಸ ಕಥನ ಕೇವಲ ಸ್ವಾರಸ್ಯಕರ, ಮಾಹಿತಿಪ್ರದವಲ್ಲ. ವಿದೇಶ ಪ್ರವಾಸ ಕೈಗೊಳ್ಳುವವರಿಗೆ, ವಿಶೇಷತಃ ಮೊದಲ ಸಲ ಕೈಗೊಳ್ಳುವವರಿಗೆ,  ಮಾರ್ಗದರ್ಶಿಯೂ ಆಗಿದೆ.

ಬೆಂಗಳೂರಿನ ಜೋಷಿಯವರು ಸಚ್ಚಾರಿತ್ರ್ಯಕ್ಕೆ ವೃತ್ತಿಪರತೆಗೆ ಹೆಸರಾದವರು. ದೇಶದ 13ರಷ್ಟು ಪತ್ರಿಕೆ-ರೇಡಿಯೋ-ಟಿವಿ-ಸುದ್ದಿ ಸಂಸ್ಥೆಗಳ  ಜೊತೆ ಅವರ ಸಂಪರ್ಕವಿದ್ದು  ತಮ್ಮದೇ ಆದ ಮೂರು ಪತ್ರಿಕೆಗಳನ್ನು ಸಂಪಾದಿಸಿ ಪ್ರಕಟಿಸಿದ್ದಾರೆ. ಇವುಗಳಲ್ಲಿ ಒಂದು ಕರ್ನಾಟಕದ ಒಂದೇ ಒಂದು ಕನ್ನಡ-ಇಂಗ್ಲೀಷ್ ದ್ವಿಭಾಷಾ ನಿಯತಕಾಲಿಕೆ.

ಪತ್ರಿಕಾ ವೃತ್ತಿಯಲ್ಲಿ ಆಗಿರುವ ಅಗಾಧ ಸ್ಥಿತ್ಯಂತರಗಳನ್ನು, ಈ ವಿಶಾಲ, ವೈವಿಧ್ಯಮಯ ಕ್ಷೇತ್ರದಲ್ಲಿ ನಡೆದಿರುವ ಘಟನೆ-ಪ್ರಸಂಗಗಳಿಂದ, ಜೋಷಿಯವರು ವಿವರಿಸಿದರು.

ಅಧ್ಯಕ್ಷತೆ ವಹಿಸಿದ ಶ್ರೀಮತಿ ಕಮಲಾ ಬಡ್ಡಿಹಳ್ಳಿಯವರು ಕನ್ನಡದ ಪ್ರವಾಸ ಸಾಹಿತ್ಯವನ್ನು ಪರಿಚಯಿಸಿದರು. ಮುಖ್ಯ ಅತಿಥಿಗಳಾದ ಲೇಖಕ ಜಿ ಕೆ ಕುಲಕರ್ಣಿಯವರು ಕಲಾಪಗಳ ತಿರುಳನ್ನು ಸಂಕ್ಷಿಪ್ತವಾಗಿ ಆದರೆ ಸ್ಫುಟವಾಗಿ ಕೊಟ್ಟರು.

ತುಮಕೂರು ವಿಶ್ವವಿದ್ಯಾಲಯದ ಪತ್ರಿಕಾ ವಿಭಾಗದ ಸಹಾಯಕ ಪ್ರಾಧ್ಯಾಪಕ ಸಿಬಂತಿ ಪದ್ಮನಾಭ ಕೆ ವಿ ಅವರು ಪ್ರವಾಸ ಕಥನದ ಮುಖ್ಯಾಂಶಗಳನ್ನು --- ಓದಬೇಕೆಂಬ ಆಸಕ್ತಿಯನ್ನು ಕೆರಳಿಸುವಂತೆ--ನೀಡಿದರು. 

ಟಿವಿ ಹಾಗೂ ಚಿತ್ರ ನಟ ಪ್ರಸಾದ ವಶಿಷ್ಠ  ಅವರಿಂದ  ಉದ್ಘಾಟನೆ. ಸಿದ್ದಾಪುರ ನರಸಿಂಹಯ್ಯ ಅವರಿಂದ ಬಹುಮಾನ ವಿತರಣೆ. ಶ್ರೀಮತಿ ಅಶ್ವಿನಿ ಪಿ ನಾಡಿಗ್ ಅವರಿಂದ ನಿರೂಪಣೆ.